ಕರೊನಾಗೆ "ಅಷ್ಟ ದಿಕ್ಪಾಲಕ ಧಿಗ್ಬಂಧನ"

ಕರೊನಾಗೆ
"ಅಷ್ಟ ದಿಕ್ಪಾಲಕ ಧಿಗ್ಬಂಧನ"

ಬಾಗೇಪಲ್ಲಿ:ಕಸಬಾ ಹೋಬಳಿಯ , ಪೊತೆಪಲ್ಲಿ ಗ್ರಾಮದಲ್ಲಿ, ಕಳೆದ 1 ವಾರದಿಂದ ಕಟ್ಟುನಿಟ್ಟಾಗಿ ಜನತಾ ಕರ್ಫ್ಯೂ ವನ್ನು ಪಾಠಿಸುವಲ್ಲಿ, ಗ್ರಾಮದ ಪ್ರತಿಯೊಬ್ಬ ನಾಗರಿಕನೂ, ಸರ್ಕಾರದ ಎಚ್ಚರಿಕೆಯ ಹಂತಗಳನ್ನು ಚಾಚೂ ತಪ್ಪದೆ ಮುನ್ನಡೆಸುವಲ್ಲಿ ನಿರತರಾಗಿದ್ದಾರೆ.
ಇದರ ನಡುವೆಯೂ, ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಿಯ ಅನುಗ್ರಹಕ್ಕೆ ಇಡೀ ಗ್ರಾಮವೇ ಕಾದು ನೋಡುವಲ್ಲಿ ಎದುರುನೋಡುತ್ತಿರುವ ದಿನಗಳಲ್ಲಿ, ಗ್ರಾಮದ ಬ್ರಾಹ್ಮಣ ಪಂಡಿತರಾದ  ಶ್ರೀ ಲೇಟ್ ಪದ್ಮನಾಭ ಶರ್ಮಾ ರವರ ಆದೇಶದಂತೆ ಸುಮಾರು 40-50ವರ್ಷಗಳ ಹಿಂದೆ ಇಡೀ ದೇಶವೇ "ಪ್ಲೇಗ್ ರೋಗ" ದಿಂದ ತತ್ತರಿಸಿ ಜನರಲ್ಲಿ ಜೀವದ ಆಸೆ-ಹಂಗು ನಿರ್ಜಿವವಾಗುವ ದುಸ್ಸಂಧರ್ಭದಲ್ಲಿ, ಆಗ ಗ್ರಾಮದ ಹಿರಿಯರಾದ ಪಟೇಲ್ ನರಸಿಂಹರೆಡ್ಡಿ, ಲೇಟ್ ಚಿಕ್ಕಮ್ಮಗಾರಿ ಪೆದ್ದ ವೆಂಕಟರಾಯಪ್ಪ,ಲೇಟ್  ಬಾವನ್ನ, ಲೇಟ್ ಕೆಂಪಣ್ಣ, ಲೇಟ್ ನಾರಾಯಣರೆಡ್ಡಿ ಹಾಗೂ ಲೇಟ್ ಚಂಚಪ್ಪಗಾರಿ ವೆಂಕಟರಾಮಪ್ಪ ಮತ್ತು ಪೂಜಾರಿ ಚೌಡಪ್ಪ ನವರ ತಂಡವು ಗ್ರಾಮಸ್ತರ ಸರ್ವತೋಮುಖ ಆರೋಗ್ಯಕ್ಕಾಗಿ ಗ್ರಾಮದೇವತೆಯ ಮೊರೆ ಹೋಗಿ ಅಂದು ಕೂಡ "ಅಷ್ಟ ದಿಕ್ಪಾಲಕ ಧಿಗ್ಬಂದನ"ವನ್ನು ಮಾಡಿಸಿ, ಗ್ರಾಮಕ್ಕೆ ಪ್ಲೇಗ್ ರೋಗದ ಭಾದೆಯನ್ನು ತಪ್ಪಿಸಿದ್ದರು ಎನ್ನಲಾಗಿದೆ. 
ನಲವತ್ತು - ಐವತ್ತು ದಶಕಗಳ ನಂತರ  2019ರ ಡಿಸೇಂಬರ್ ತಿಂಗಳಿನಲ್ಲಿ ಭಾರತದ ಹೊರಗಿನ ದೇಶವಾದ ಚೀನಾದ " ಹುಯಾನ್" ಮಾರ್ಕೆಟ್ ನಲ್ಲಿ ಉಧ್ವಸಿದ  ಮಹಂಮಾರಿ ಕರೊನಾ -ಕೋವಿಡ್ 19 ಹೆಸರಿನ ವೈರಸ್ನ ಪ್ರಭಾವದಿಂದ ಇಂದಿಗೆ ದೇಶಾದ್ಯಂತ ಸುಮಾರು 10 ಸಾವಿರಕ್ಕೂ ರೋಗಪೀಡಿತರಾಗಿ ಸಾವು-ನೋವಿನ ನರಳಾಟದಲ್ಲಿ ಬಳಲುತ್ತಿದ್ದಾರೆ. ಇಂತಹ ಗಂಭೀರ ಸಮಯದಲ್ಲಿ ಕರ್ನಾಟಕದಲ್ಲಿ ಕೂಡ ಸುಮಾರು 60 ಕ್ಕು ಹೆಚ್ಚು ರೋಗ ಗ್ರಸ್ತರರನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಸುಮಾರು 6 ರಿಂದ 9 ಕೇಸುಗಳನ್ನು ತೀವ್ರ ನಿಗಾವಹಿಸುವಲ್ಲಿ ಆರೋಗ್ಯ ಇಲಾಖೆ ಹಗಲಿರುಳು ಶ್ರಮಿಸುತ್ತಿದ್ದಾರೆ..
ಇಂತಹ ಸಂಧಿಗ್ದ ಸಮಯದಲ್ಲಿ ಗ್ರಾಮದ ವಾಡಿಕೆಯಂತೆ, ಗ್ರಾಮ ಮುಖಂಡರ, ಗ್ರಾಮಸ್ಥರ ಕೋರಿಕೆಯಂತೆ ಮತ್ತೊಮ್ಮೆ "ಅಷ್ಟ ದಿಕ್ಪಾಲಕ ದಿಗ್ಬಂಧನ"ದ ಕಾರ್ಯಕ್ರಮವನ್ನು ನಡೆಸಿ ಗ್ರಾಮಸ್ತರಲ್ಲಿನ ಭಯಾಂಧೋಳನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ, ಸದರಿ ಕಾರ್ಯಕ್ರಮವನ್ನು ಬ್ರಾಹ್ಮಣ ಪಂಡಿತ್ ಲೇಟ್ ಪದ್ಮನಾಭ ಶರ್ಮರ ವಾರಸುಧಾರರಾದ ಶ್ರೀ ಪ್ರಸಾದ್ ಶರ್ಮ ರವರ ಮಾರ್ಗದರ್ಶನದಂತೆ , ಅನ್ನದ ಎಡೆ ಹಾಗೂ ಹಲವು ಪೂಜಾಸಾಮಗ್ರಿಗಳಾದ ಗೋ ಗಂಜಲ, ಬೇವಿನ ಎಲೆ, ಕರ್ಪುರಾದಿ ಧೂಪ ದೀಪಗಳೊಂದಿಗೆ ಗ್ರಾಮದ ಸುತ್ತಲೂ ಎಂಟು ದಿಕ್ಕುಗಳಲ್ಲಿ ಪೂಜೆಯನ್ನು ಸಲ್ಲಿಸಿ, ಮಂತ್ರಾಕ್ಷತೆ ಯನ್ನು ಸಲ್ಲಿಸುವುದರೊಂದಿಗೆ ಗ್ರಾಮ ದೇವತೆಗೆ ಪೂಜೆ ಸಲ್ಲಿಸಲಾಯಿತು.
ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಿಯ ಕೃಪೆಗೆ ಪಾತ್ರರಾಗುವಲ್ಲಿ ಗ್ರಾಮದ ಹಿರಿಯರಾದ ಶ್ರೀ ಲಕ್ಷ್ಮಿ ಪತಿರೆಡ್ಡಿ, ಶ್ರೀರಾಮರೆಡ್ಡಿ, ಕೃಷ್ಣಾರೆಡ್ಡಿ, ಭಾಸ್ಕರ್ ರೆಡ್ಡಿ-ಶಿಕ್ಷಕರು, ಗೋವಿಂದರೆಡ್ಡಿ-ಶಿಕ್ಷಕರು, ಚಂಚಪ್ಪಗಾರಿ ಕೃಷ್ಣಪ್ಪ, ಶ್ರೀನಿವಾಸರೆಡ್ಡಿ, ಪೂಜಾರಿ ಚೌಡಪ್ಪ, ಪೂಜಾರಿ ನಲ್ಲ ಚೌಡಪ್ಪ, ಪೂಜಾರಿ ಲಕ್ಷ್ಮೀನಾರಾಯಣ ಹಾಗೂ ಗ್ರಾಮದ ಯುವಕರು, ಮಹಿಳೆಯರು, ಮಕ್ಕಳು ಹಾಗೂ ಇತರರು ನಿರತರಾಗಿದ್ದರು..