ಕೊರೊನಾ ಓಡಿಸುವುದಕ್ಕೆ ಕೈ ಜೋಡಿಸುತ್ತಿದ್ದಾರೆ ಕೈದಿಗಳು!

ಕೊರೊನಾ ಓಡಿಸುವುದಕ್ಕೆ ಕೈ ಜೋಡಿಸುತ್ತಿದ್ದಾರೆ ಕೈದಿಗಳು!
ಜೈಲು ಕೈದಿಗಳ ಸುರಕ್ಷತೆ ಬಗ್ಗೆ ಸರ್ಕಾರ ಕ್ರಮ
ಕೊರೊನಾ ಓಡಿಸುವುದಕ್ಕೆ ಕೈ ಜೋಡಿಸುತ್ತಿದ್ದಾರೆ ಕೈದಿಗಳು!

ಬೆಂಗಳೂರು : ಕೊರೊನಾ ನಿಯಂತ್ರಿಸುವುದಕ್ಕಾಗಿ ಜೈಲಿನಲ್ಲಿರುವ ಕೈದಿಗಳು ಕೂಡ ಸರ್ಕಾರಕ್ಕೆ ನೆರವಾಗಿದ್ದಾರೆ ಎಂದು ಗೃಹ ಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮತಾನಾಡಿದ ಅವರು, ಜನಸಾಮಾನ್ಯರಿಗೆ ಅಗತ್ಯವಾಗಿರುವ ಮಾಸ್ಕ್‌ ತಯಾರಿಸುವ ಕೆಲಸದಲ್ಲಿ ಕೈದಿಗಳು ತೊಡಗಿಕೊಂಡಿದ್ದಾರೆ. ಇದುವರೆಗೂ 17 ಸಾವಿರ ಮಾಸ್ಕ್‌ ತಯಾರಿಸಿ ನೀಡಿದ್ದಾರೆ. ಅವರು ನಿತ್ಯ 5 ಸಾವಿರ ಮಾಸ್ಕ್ ಗಳನ್ನು ತಯಾರಿಸುತ್ತಿದ್ದಾರೆ. ಈಗಾಗಲೇ 17 ಸಾವಿರ ಮಾಸ್ಕ್ ನೀಡಿದ್ದಾರೆ. ಇನ್ನು ಒಂದು ವಾರಗಳ ಕಾಲ ಇಲಾಖೆಗೆ ಅಗತ್ಯವಿರುವ ಮಾಸ್ಕಗಳನ್ನು ತಯಾರಿಸಿ ನೀಡುತ್ತಾರೆ ಎಂದು ತಿಳಿಸಿದ್ದಾರೆ.
ಜೈಲು ಕೈದಿಗಳ ಸುರಕ್ಷತೆ ಬಗ್ಗೆ ಕೂಡ ಸರ್ಕಾರ ಕ್ರಮ ಜರುಗಿಸಿದ್ದು, ಕೈದಿಗಳು ಜೈಲಿನ ಒಳಗೆ ಕ್ವಾರಂಟೈನ್ ಗೆ ಒಳಗಾಗುತ್ತಿದ್ದಾರೆ. ನೋಡಲು ಬರುವವರನ್ನ ತಡೆಯಿರಿ ಎಂದು ಹೇಳಲಾಗಿದೆ. ಹೀಗಾಗಿ ಎಲ್ಲರೂ ಅದರಂತೆ ನಡೆದುಕೊಳ್ಳುತತಿದ್ದಾರೆ. ಹೊಸ ಕೈದಿಗಳಇಗೆ ಪೂರ್ತಿ ಪ್ರಮಾಣದಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ ಎದು ಹೇಳಿದ್ದಾರೆ.
ಕ್ವಾರಂಟೈನ್ ಗೆ ಒಳಗಾದವರನ್ನು ಸಂಪೂರ್ಣವಾಗಿ ಗುರುತಿಸುವ ಕಾರ್ಯ ನಡೆದಿದೆ. ಕೆಲವರು ಈ ನಿಯಮವನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಮನೆಯ ಹೊರಗೆ ಓಡಾಡುತ್ತಿರುವವರ ಕುರಿತು ನೊಟೀಸ್ ನೀಡಲು ಮುಂದಾಗಿದ್ದೇವೆ. 9 ಜಿಲ್ಲೆಗಳಲ್ಲಿ ಸೆಕ್ಷನ್ 144 ಮುಂದುವರೆಸಲಾಗುತ್ತೆ. 9 ಜಿಲ್ಲೆಗಳಲ್ಲಿ ವಾಣಿಜ್ಯ ವ್ಯವಹಾರ ಇಲ್ಲ ಕೇವಲ ನಿತ್ಯದ ಅವಶ್ಯಕತೆಗಳಿಗ ಮಾರಾಟಕ್ಕೆ ಮಾತ್ರ ಅವಕಾಶವಿದೆ ಎಂದು ತಿಳಿಸಿದ್ದಾರೆ.