ಮೋದಿ ದೀಪ ಹಚ್ಚಿ ಅಂದ್ರೆ..ಈಕೆ ಗುಂಡು ಹಾರಿಸಿದ್ಲು..

ಮೋದಿ ದೀಪ ಹಚ್ಚಿ ಅಂದ್ರೆ..ಈಕೆ ಗುಂಡು ಹಾರಿಸಿದ್ಲು..
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ
ಮೋದಿ ದೀಪ ಹಚ್ಚಿ ಅಂದ್ರೆ..ಈಕೆ ಗುಂಡು ಹಾರಿಸಿದ್ಲು..

ನವದೆಹಲಿ: ಭಾನುವಾರ ರಾತ್ರಿ 9ಗಂಟೆಗೆ 9 ನಿಮಿಷ ಲೈಟ್ ಆಫ್ ಮಾಡಿ ದೀಪ ಬೆಳಗಲು ಪ್ರಧಾನಿ ಮೋದಿ ಕರೆ ನೀಡಿದ್ದು, ಅಂತೆಯೇ ದೇಶದ ಜನರೆಲ್ಲಾ ದೀಪ ಹಚ್ಚಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ.ಆದರೆ ದೀಪ ಹಚ್ಚಿದ ಬಳಿಕ ಮಹಿಳೆ ಮುಖಂಡರೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನಡೆದಿದೆ. 
ಹೌದು, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜು ತಿವಾರಿ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಬಲರಾಮ್ ಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಇನ್ನು ಕೋರೋನಾ ಸೋಂಕು ವಿರುದ್ಧದ ಹೋರಾಟದಲ್ಲಿ ಎಲ್ಲರೂ ದೀಪ ಹಚ್ಚಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಮೋದಿ ಕರೆ ನೀಡಿದ್ದರು. ಅದನ್ನು ತಪ್ಪಾಗಿ ಅರ್ಥೈಸಿಕೊಂಡ ಮಂಜು ತಿವಾರಿ ಗನ್ ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ.