ವಿದೇಶದಿಂದ ಬಂದವರನ್ನು ಐಸೋಲೇಶನ್‌ನಲ್ಲಿಡಿ..

ವಿದೇಶದಿಂದ ಬಂದವರನ್ನು ಐಸೋಲೇಶನ್‌ನಲ್ಲಿಡಿ..
ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು:ಕಿಸಾನ್ ಸಮ್ಮಾನ್ ಯೋಜನೆಯ ಮೊತ್ತವನ್ನು ೨೦ ಸಾವಿರಕ್ಕೆ ಹೆಚ್ಚಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಆರು ಸಾವಿರ ರೂಪಾಯಿಯನ್ನು ಮೂರು ಕಂತುಗಳಲ್ಲಿ ಕೊಡುತ್ತದೆ. ರಾಜ್ಯ ಸರ್ಕಾರ ಅದಕ್ಕೆ ನಾಲ್ಕು ಸಾವಿರ ಸೇರಿಸಿ ಒಟ್ಟು ೧೦ ಸಾವಿರ ರೂ ಕೊಡುತ್ತದೆ. ಆದರೆ, ಕೇಂದ್ರ ಸರ್ಕಾರ ತಾನು ನೀಡುವ ಹಣವನ್ನು ೧೨ ಸಾವಿರಕ್ಕೆ ಏರಿಸಬೇಕು. ರಾಜ್ಯ ಸರ್ಕಾರ ನಾಲ್ಕು ಸಾವಿರ ಬದಲು ಎಂಟ ಸಾವಿರ ಮಾಡಬೇಕು ಅಂತ ಸಲಹೆ ನೀಡಿದರು.
ಕೊರೋನಾ ವೈರಸ್ ಸೋಂಕು ನಿಗ್ರಹಿಸಲು ಸರ್ಕಾರ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಬೇಕು. ಪ್ರತೀ ಜಿಲ್ಲೆಯಲ್ಲಿ ೨೦೦-೩೦೦ ಐಸೋಲೇಶನ್ ವಾರ್ಡ್ ನಿರ್ಮಿಸಬೇಕು. ವಿದೇಶದಿಂದ ಬಂದವರನ್ನು ಐಸೋಲೇಶನ್‌ನಲ್ಲಿಡಬೇಕು. ಮನೆಮನೆಗೆ ತೆರಳಿ ಜನರಿಗೆ ಮಾಸ್ಕ್ ನೀಡಬೇಕು. ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗೆ ಮೊದಲು ಕಿಟ್ ನೀಡಬೇಕು ಅಂತ ಆಗ್ರಹಿಸಿದರು.