ಸಂಪೂರ್ಣ ತುಂಡಾಗಿದ್ದ ಮುಂಗೈ ಜೋಡಿಸಿದ ವೈದ್ಯರು..

ಸಂಪೂರ್ಣ ತುಂಡಾಗಿದ್ದ ಮುಂಗೈ ಜೋಡಿಸಿದ ವೈದ್ಯರು..
ತುಂಡಾಗಿದ್ದ ಮುಂಗೈ ಜೋಡಿಸಿದ ವೈದ್ಯರು..

ಚಿಕ್ಕಬಳ್ಳಾಪುರ:ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ನಡೆದ ದುರ್ಘಟನೆಯದಿಂದಾಗಿ ಸಂಪೂರ್ಣ ತುಂಡಾಗಿದ್ದ ಮುಂಗೈಯನ್ನು ಶಸ್ತ್ರಚಿಕಿತ್ಸೆ ಮೂಲಕ ಮೊದಲಿನಂತೆ ಮಾಡುವಲ್ಲಿ ಬೆಂಗಳೂರು ಸಂಜಯಗಾAಧಿ ಟ್ರಾಮ ಮತ್ತು ಅಸ್ಥಿ ಮತ್ತು ಚಿಕಿತ್ಸಾ ಕೇಂದ್ರದ ವೈದ್ಯರು ಯಶಸ್ವಿಯಾಗಿದ್ದಾರೆ.
ಗೌರಿಬಿದನೂರು ತಾಲ್ಲೂಕಿನ ರಮಾಪುರ ಗ್ರಾಮದಲ್ಲಿ ಹನುಮಂತ(೩೫) ಎಂಬುವರ ಮುಂಗೈಯನ್ನು ತನ್ನ ಅಣ್ಣನು ಸಣ್ಣ ಜಗಳ ವಿಚಾರದಲ್ಲಿ ತುಂಡಾರಿಸಿದ್ದ ಘಟನೆ ನಡೆದ ೬ ತಾಸಿನೊಳಗೆ ಅಸ್ಪೆತ್ರೆಗೆ ಬಂದಿದ್ದರಿAದ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಯಿತು ಎಂದು ಅಸ್ಪೆತ್ರೆಯ ನಿರ್ದೇಶಕ ಡಾ.ಎಚ್.ಎಸ್. ಚಂದ್ರಶೇಖರ್ ತಿಳಿಸಿದ್ದಾರೆ.ಸುಮಾರು ಅರು ತಾಸು ಶಸ್ತ್ರಚಿಕತ್ಸೆ ನಡೆಸಿ ಮುಂಗೈಯನ್ನು ಜೋಡಿಸಲಾಯಿತು ಎಂದು ವೈದ್ಯರ ತಂಡ ತಿಳಿಸಿದೆ.
ರಕ್ತನಾಳಗಳನ್ನು ಮೈಕ್ರೋಸ್ಕೋಪ್ ಮೂಲಕ ಹೊಲೆದು ಜೋಡಿಸಿ ಈ ಶಸ್ತ್ರಚಿಕಿತ್ಸೆಗೆ ಮೈಕ್ರೊವ್ಯಾಸ್ಕಲರ್ ಸರ್ಜರಿ ಎನ್ನುತ್ತಾರೆ. 
ದೇಹದ ಅಂಗಾAಗಗಳು ಸರಿಯಾಗಿ ತುಂಡಾದಾಗ (ಕ್ಲೀನ್‌ಕಟ್) ಅಂದರೆ ಮಚ್ಚು, ಕೊಡಲಿ, ಕುಡಗೋಲು, ಚಾಕುವಿನಿಂದ ಕೈ ಕಾಲು ಬೆರಳು ಕತ್ತರಿಸಿದಾಗ ಈ ಶಸ್ತ್ರಚಿಕಿತ್ಸೆಯನ್ನು ಮಾಡಬಹುದು ಅದರೆ, ಅಪಘಾತದಲ್ಲಿ ಕಾಲು ಅಥವಾ ಕೈ ಸಂಪೂರ್ಣ ನಜ್ಜುಗುಜ್ಜಾದಂತೆ ಹಾನಿಗೀಡಾಗಿದ್ದರೆ ಈ ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ ಎನ್ನುತ್ತಾರೆ ವೈದ್ಯರು.
ಸರ್ಕಾರಿ ಅಸ್ಪೆತ್ರೆಗಳಲ್ಲಿ ಈ ಮಾದರಿಯ ಶಸ್ತ್ರಚಿಕಿತ್ಸೆ ಮಾಡುವುದಿಲ್ಲ. ಅಲ್ಲದೆ ಕೋವಿಡ್-೧೯ ಹರಡುತ್ತಿರುವ ಈ ಸಂದರ್ಭದಲ್ಲಿ ಯಾವ ಅಸ್ಪೆತ್ರೆಗಳ ಈ ಕಾರ್ಯಕ್ಕೆ ಕೈ ಹಾಕುವುದಿಲ್ಲ ನಮ್ಮ ಅಸ್ಪೆತ್ರೆಯಲ್ಲಿ ಎಲ್ಲ ಸೌಲಭ್ಯ ಇರುವುದರಿಂದ ಶಸ್ತ್ರಚಿಕಿತ್ಸೆ ನಡೆಸಿದೇವು ಎಂದು ಆಸ್ಪತ್ರೆಯ ಚಂದ್ರಶೇಖರ್ ಹೇಳಿದರು.
ಇಂತಹ ಅವಘಡ ಅಥವಾ ಅಪಘಾತವಾಗಿ ಅರು ತಾಸಿನೊಳಗೆ ರೋಗಿಯು ಅಸ್ಪೆತ್ರೆಗೆ ಬರಬೇಕು ಅಗ ಮಾತ್ರ ತುಂಡಾದ ಅಂಗೈಯಲ್ಲಿನ ಅಂಗಾAಶ, ಜೀವಕೋಶಗಳು ಇನ್ನೂ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರುತ್ತದೆ. ೬ ತಾಸು ಮೀರಿದರೆ ಇಂತಹ ಶಸ್ತ್ರಚಿಕಿತ್ಸೆ ನಡೆಸಲು ಕಷ್ಟವಾಗುತ್ತದೆ ಎಂದರು.
ಬೇರೆ ಅಸ್ಪೆತ್ರೆಗಳಲ್ಲಿ ರೂ ೩ರಿಂದ ೪ಲಕ್ಷ ಇಂತಹ ಶಸ್ತ್ರಚಿಕಿತ್ಸೆ ಖರ್ಚು ಅಗುತ್ತದೆ.ನಾವು ಇದನ್ನು ಉಚಿತವಾಗಿ ಮಾಡಿದ್ದೇವೆ.ಅಸ್ತಿ ವಿಷಯಕ್ಕೆ ನಡೆದ ಜಗಳದಲ್ಲಿ ಸಹೋದರ ಮುಂಗೈಯನ್ನು ಅಕಸ್ಮಿಕವಾಗಿ ಕತ್ತರಿಸಿದ ಅಣ್ಣ ತಮ್ಮನ ಜಗಳ ಇದ್ದಿದ್ದೇ ಎನ್ನುವ ಕಾರಣದಿಂದ ಯಾವುದೇ ದೂರು ನೀಡಿಲ್ಲ ವೈದ್ಯರು ತಕ್ಷಣಕ್ಕೆ ಸ್ಪಂದಿಸಿ ಶಸ್ತ್ರಚಿಕಿತ್ಸೆ ನಡೆಸಿದ್ದರಿಂದ ಕೈ ಮೊದಲಿನಂತಾಗಿದೆ ಎಂದು ಹನುಮಂತ ಹರ್ಷ ವ್ಯಕ್ತಪಡಿಸಿದ್ದಾರೆ.