ಪೊಲೀಸರ ಕಿರುಕುಳ ತಾಳಲಾರದೆ ಯುವಕ ಆತ್ಮಹತ್ಯೆ?

ಪೊಲೀಸರ ಕಿರುಕುಳ ತಾಳಲಾರದೆ ಯುವಕ ಆತ್ಮಹತ್ಯೆ?
ಯುವಕ ಆತ್ಮಹತ್ಯೆ
ಪೊಲೀಸರ ಕಿರುಕುಳ ತಾಳಲಾರದೆ ಯುವಕ ಆತ್ಮಹತ್ಯೆ?

ಮೈಸೂರು: ಮನೆಯ ಸ್ನಾನದ ಕೋಣೆಯಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸುಣ್ಣದಕೇರಿ  ೮ನೇ ಕ್ರಾಸ್ ನಲ್ಲಿ ನಡೆದಿದೆ.
ದರ್ಶನ್ (೧೭) ಆತ್ಮಹತ್ಯೆ ಮಾಡಿಕೊಂಡ ಯುವಕ.ಪೊಲೀಸರ ಕಿರುಕುಳ ತಾಳಲಾರದೆ ತಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಇತ್ತೀಚೆಗೆ ಸ್ಕೂಟರ್ ತಪಾಸಣೆ ವೇಳೆ ಹಿಂಬದಿಯ ನಂಬರ್ ಪ್ಲೇಟ್ ಇರಲಿಲ್ಲ.ಅದನ್ನು ಪ್ರಶ್ನಿಸಿ ಪೊಲೀಸರು ಯುವಕನಿಂದ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ಅದಾದ ನಂತರ ಯುವಕ ಪೊಲೀಸರಿಂದ ಸ್ಕೂಟರ್ ಹಿಂಪಡೆದಿದ್ದಾನೆ.ಈ ವೇಳೆ ಪೊಲೀಸರು ಯುವಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆನ್ನಲಾಗಿದೆ.ಇದಾದ ಬಳಿಕ ಆ ಯುವಕ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ತಮ್ಮ ಮಗನ ಆತ್ಮಹತ್ಯೆಗೆ ಕೆ.ಆರ್.ಠಾಣೆ ಪೊಲೀಸ್ ಸಿಬ್ಬಂದಿಯೇ ಕಾರಣ. ಸ್ಕೂಟರ್ ವಶಕ್ಕೆ ಪಡೆದು ಆತನನ್ನು ಹಿಗ್ಗಾಮುಗ್ಗಾ ಥಳಿಸಿ ಕಳುಹಿಸಿದ್ದಾರೆ. ದರ್ಶನ್ ಅವಮಾನ ಸಹಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.