ಕಲಬುರಗಿಯಲ್ಲಿ ಬೆಳ್ಳಂಬೆಳಿಗ್ಗೆ ಎಸಿಬಿ ದಾಳಿ

ಕಲಬುರಗಿಯಲ್ಲಿ ಬೆಳ್ಳಂಬೆಳಿಗ್ಗೆ ಎಸಿಬಿ ದಾಳಿ
ದೇವರಾಜ್ ಅರಸು  ಅಭಿವೃದ್ಧಿ ನಿಗಮದ ಕಲಬುರಗಿ, ಯಾದಗಿರಿ ವ್ಯವಸ್ಥಾಪಕ ಜಗದೇವಪ್ಪ ಮುಗುಟ
ಕಲಬುರಗಿಯಲ್ಲಿ ಬೆಳ್ಳಂಬೆಳಿಗ್ಗೆ ಎಸಿಬಿ ದಾಳಿ

ಕಲಬುರಗಿ: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಅಧಿಕಾರಿಯೊಬ್ಬರಿಗೆ ಬೆಳ್ಳಂಬೆಳಿಗ್ಗೆ ಎಸಿಬಿ ಶಾಕ್ ನೀಡಿದೆ.
ಅಂದ ಹಾಗೇ ದೇವರಾಜ್ ಅರಸು  ಅಭಿವೃದ್ಧಿ ನಿಗಮದ ಕಲಬುರಗಿ ಮತ್ತು ಯಾದಗಿರಿ ವ್ಯವಸ್ಥಾಪಕ ಜಗದೇವಪ್ಪ ಮುಗುಟ ಎಸಿಬಿ ದಾಳಿಗೊಳಗಾದ ಅಧಿಕಾರಿಯಾಗಿದ್ದಾರೆ.
ಇನ್ನು ಜಗದೇವಪ್ಪನ ಕಲಬುರಗಿಯ ಮನೆ,ಕಾಂಪ್ಲೆಕ್ಸ್, ಯಾದಗಿರಿ ಆಫೀಸ್ , ಬೀದರ್ ಮನೆ ಮೇಲೆ ಏಕಕಾಲದಲ್ಲಿ ಕಲಬುರಗಿ ಮತ್ತು ಯಾದಗಿರಿ ಎಸಿಬಿಯ ಡಿವೈಎಸ್ಪಿಗಳ ನೇತೃತ್ವದಲ್ಲಿ ದಾಳಿ ನಡೆದಿದೆ.
ಸದ್ಯ ದಾಳಿ ವೇಳೆ ೪೦ಕ್ಕೂ ಹೆಚ್ಚು ಎಸಿಬಿ ಸಿಬ್ಬಂದಿಗಳಿAದ ದಾಖಲೆ ಪರಿಶೀಲನೆ ನಡೆದಿದೆ ಎಂದು ತಿಳಿದು ಬಂದಿದೆ.