ಮಂಗಳ ಮುಖಿಯರ ಸಹಾಯಕ್ಕೆ ಬಂದ ದರ್ಶನ್

ಮಂಗಳ ಮುಖಿಯರ ಸಹಾಯಕ್ಕೆ ಬಂದ ದರ್ಶನ್
ಅಡುಗೆ ಪದಾರ್ಥ ವಿತರಣೆ..

ಬೆAಗಳೂರು: ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಬಡವರಿಗೆ,ನಿರ್ಗತಿಕರಿಗೆ ಊಟದ ವ್ಯವಸ್ಥೆ ಹಾಗೂ ಅಕ್ಕಿ ಬೇಳೆ ಇತ್ಯಾದಿ ಅಡುಗೆ ಪದಾರ್ಥಗಳನ್ನು ವಿತರಿಸುವ ಕಾರ್ಯ ಮುಂದುವರೆಸಿದ್ದಾರೆ.
ಸದ್ಯ ಮೈಸೂರಿನಲ್ಲಿ ಸುಮಾರು ೫೦ ಕ್ಕೂ ಹೆಚ್ಚು ಮಂಗಳ ಮುಖಿಯರಿಗೆ  ಡಿಬಾಸ್ ಅಭಿಮಾನಿ ನಾಗಣ್ಣ ಅವರ ನೇತೃತ್ವದಲ್ಲಿ ಅಕ್ಕಿ ಬೇಳೆ ಇತ್ಯಾದಿ ಅಡುಗೆ ಪದಾರ್ಥಗಳನ್ನು ವಿತರಿಸಿದರು.
ಇನ್ನು ಪ್ರತಿ ದಿನ ನಿರ್ಗತಿಕರಿಗೆ ಅಹಾರ ಒದಗಿಸುತ್ತಿರುವ ಅಭಿಮಾನಿಗಳು ಮೈಸೂರಿನ ಅಜೀಜ್ ಸೇಠ್ ಬ್ಲಾಕ್‌ನಲ್ಲಿ ೫೦ ಕ್ಕೂ ಹೆಚ್ಚು ಮಂಗಳ ಮುಖಿಯರ ಮನೆ ಮನೆಗೆ ದಿನಸಿ ಪದಾರ್ಥಗಳನ್ನು ವಿತರಣೆ ಮಾಡುತ್ತಿದ್ದು, ಲಾಕ್ ಡೌನ್‌ನಿಂದ ಸಂಕಷ್ಟದಲ್ಲಿರುವ ಮಂಗಳಮುಖಿಯರ ಸಹಾಯಕ್ಕೆ ಬಂದಿದ್ದಾರೆ.