ಬೈಸಿಕಲ್ ಏರಲು ಮಾಜಿ ಸಿಎಂಗೆ ಪಂಚೆ ಅಡ್ಡಿ..! ಕೊನೆಗೂ ಸೈಕಲ್ ಏರಿದ ಸಿದ್ದು, ಡಿಕೆಶಿ..

ಬೈಸಿಕಲ್ ಏರಲು ಮಾಜಿ ಸಿಎಂಗೆ ಪಂಚೆ ಅಡ್ಡಿ..! ಕೊನೆಗೂ ಸೈಕಲ್ ಏರಿದ ಸಿದ್ದು, ಡಿಕೆಶಿ..
ಕೊನೆಗೂ ಸೈಕಲ್ ಏರಿದ ಸಿದ್ದು
ಬೈಸಿಕಲ್ ಏರಲು ಮಾಜಿ ಸಿಎಂಗೆ ಪಂಚೆ ಅಡ್ಡಿ..! ಕೊನೆಗೂ ಸೈಕಲ್ ಏರಿದ ಸಿದ್ದು, ಡಿಕೆಶಿ..
ಬೈಸಿಕಲ್ ಏರಲು ಮಾಜಿ ಸಿಎಂಗೆ ಪಂಚೆ ಅಡ್ಡಿ..! ಕೊನೆಗೂ ಸೈಕಲ್ ಏರಿದ ಸಿದ್ದು, ಡಿಕೆಶಿ..

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಇಂದು ಬೃಹತ್ ಪ್ರತಿಭಟನೆಗೆ ನಡೆಸುವ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ  ಡಿ.ಕೆ.ಶಿವಕುಮಾರ್ ತಮ್ಮ ನಿವಾಸದಿಂದ ಸೈಕಲ್ ಏರಿ ಹೊರಟರು.
ಅಂದ ಹಾಗೇ ಇಂದು ಬೆಳಗ್ಗೆಯಿಂದಲೇ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸ ಪ್ರತಿಭಟನೆ ಚಟುವಟಿಕೆಯ ಕೇಂದ್ರವಾಗಿತ್ತು. 
ಇನ್ನು ಬೆಳಗ್ಗೆಯೇ ಸಿದ್ದರಾಮಯ್ಯ ನಿವಾಸದ ಮುಂಭಾಗ ಬಿಬಿಎಂಪಿ ಸಿಬ್ಬಂದಿ ಸ್ಯಾನಿಟೈಸಿಂಗ್ ಮಾಡಿದ ಬಳಿಕ ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ಜಮೀರ್ ಅಹಮ್ಮದ್ ಸೇರಿದಂತೆ ವಿವಿಧ ನಾಯಕರು ನಿವಾಸಕ್ಕೆ ಭೇಟಿ ನೀಡಿದರು.
ಇನ್ನು ಇವರೆಲ್ಲರೂ ಸಿದ್ದರಾಮಯ್ಯ ಜೊತೆ ಸೈಕಲ್ ಏರಿ ಕೆಪಿಸಿಸಿ ಕಚೇರಿಗೆ ತೆರಳಿದರು.ಆದರೆ ಇದರ ನಡುವೆ ಸಿದ್ದರಾಮಯ್ಯ ಸೈಕಲ್ ಏರಲು ಸಾಕಷ್ಟು ಕಷ್ಟಪಟ್ಟ ಘಟನೆ ನಡೆಯಿತು.ಸದ್ಯ ಸೈಕಲ್ ಏರಲು ಸಿದ್ದರಾಮಯ್ಯರ ಪಂಚೆ ಅಡ್ಡಬರುತ್ತಿತ್ತು.ಆದರೂ ಪಂಚೆ ಎತ್ತಿ ಕಟ್ಟಿ ಸಿದ್ದರಾಮಯ್ಯ ಸೈಕಲ್ ಏರಿ ಚೆಲುವರಾಯಸ್ವಾಮಿ, ಜಮೀರ್ ಅಹಮ್ಮದ್ ಜೊತೆ ಹೊರಟೇ ಬಿಟ್ಟರು..
ಇನ್ನುಮನೆಯಿಂದ ಹೊರಡುವ ಮುನ್ನ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ೭೪ನೇ ಇಸಿವಿಯಿಂದ ಸೈಕಲ್ ಹೊಡೆದಿರಲಿಲ್ಲ. ಈಗಲೇ ಸೈಕಲ್ ಹೊಡೆದಿರೋದು ಅಂತ ತಮ್ಮ ಸೈಕಲ್ ಪ್ರಸಂಗದ ಬಗ್ಗೆ ಮಾಹಿತಿ ನೀಡಿದರು.