ಕಿಲ್ಲರ್ ಕೊರೊನಾ ಮಹಾ ಸ್ಫೋಟ : 8 ಜನ ಬಲಿ..ಸಿಲಿಕಾನ್ ಸಿಟಿಯಲ್ಲೇ ಕೊರೊನಾ ಅಟ್ಟಹಾಸ

ಕಿಲ್ಲರ್ ಕೊರೊನಾ ಮಹಾ ಸ್ಫೋಟ : 8 ಜನ ಬಲಿ..ಸಿಲಿಕಾನ್ ಸಿಟಿಯಲ್ಲೇ ಕೊರೊನಾ ಅಟ್ಟಹಾಸ
ಸಿಲಿಕಾನ್ ಸಿಟಿಯಲ್ಲೇ ಕೊರೊನಾ ಅಟ್ಟಹಾಸ
ಕಿಲ್ಲರ್ ಕೊರೊನಾ ಮಹಾ ಸ್ಫೋಟ : 8 ಜನ ಬಲಿ..ಸಿಲಿಕಾನ್ ಸಿಟಿಯಲ್ಲೇ ಕೊರೊನಾ ಅಟ್ಟಹಾಸ

ಬೆಂಗಳೂರು:ಮಹಾಮಾರಿ ಕೊರೊನಾ ವೈರಸ್‌ಗೆ ರಾಜ್ಯದಲ್ಲಿ ೮ ಮಂದಿ ಬಲಿಯಾಗಿದ್ದಾರೆ. ಇದರಿಂದ ಸಾವಿನ ಸಂಖ್ಯೆ ೧೦೨ಕ್ಕೆ ಏರಿಕೆಯಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಲೇ ಇದೆ.ಅದರಂತೆ ಇಂದು ಬೆಂಗಳೂರಿನಲ್ಲಿ ಐವರು ಸೋಂಕಿತರು ಮೃತಪಟ್ಟಿದ್ದಾರೆ. ಇದರಿಂದ ಬೆಂಗಳೂರು ಜಿಲ್ಲೆಯಲ್ಲೇ ಸಾವಿನ ಸಂಖ್ಯೆ ೪೩ ಕ್ಕೆ ಏರಿಕೆಯಾಗಿದೆ.
೭೦ ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದ್ದು ಜೂನ್ ೧೦ ರಂದು ಬೆಂಗಳೂರಿನ ನಿಗಧಿತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.೩೯ ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
೬೪ ವರ್ಷದ ವ್ಯಕ್ತಿಗೆ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದು, ಜೂನ್ ೧೪ ರಂದು ನಿಗಧಿತ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಜೂನ್ ೧೫ ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.೬೧ ವರ್ಷದ ಹಾಗು ೯೦ ವರ್ಷದ ವ್ಯಕ್ತಿಗೆ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲಿದ್ದು, ಜೂನ್ ೧೫ ರಂದು ನಿಗಧಿತ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಿನ್ನೆ ಮೃತಪಟ್ಟಿದ್ದಾರೆ.
ಶಿವಮೊಗ್ಗ ಮೂಲದ ೫೬ ವರ್ಷದ ಮಹಿಳೆ ಹಾಗು ಬೀದರ್ ಮೂಲದ ೨೬ ವರ್ಷದ ಪುರುಷನಿಗೆ ಕೊರೊನಾ ಸೋಂಕು ಇರುವುದು ಧೃಡವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಬಳ್ಳಾರಿ ಮೂಲದ ೬೨ ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ನಿಗಧಿತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.