ಜುಲೈ ತಿಂಗಳಲ್ಲಿ ಅತಿ ಹೆಚ್ಚು ಕೊರೊನಾ ಹರಡುವ ಮುನ್ಸೂಚನೆ

Corona Virus

ಜುಲೈ ತಿಂಗಳಲ್ಲಿ ಅತಿ ಹೆಚ್ಚು ಕೊರೊನಾ ಹರಡುವ ಮುನ್ಸೂಚನೆ

ಚಿಕ್ಕಬಳ್ಳಾಪುರ: ಜುಲೈ ತಿಂಗಳಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಹರಡುವ ಮುನ್ಸೂಚನೆ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಜವಾದ ಕೊರೊನಾ ಸ್ಪೈಕ್ ಜುಲೈನಲ್ಲಿ ಬರಬಹುದು ಅಂತ ಪರಿಣತರು ಹೇಳಿದ್ದಾರೆ. ಅದಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನ ನಾವು ಮಾಡಿಕೊಂಡಿದ್ದೇವೆ ಎಂದರು.
ವಿದೇಶಗಳಲ್ಲಿ ಒಂದೆರಡು ತಿಂಗಳಲ್ಲೇ ಸ್ಪೈಕ್ ಬಂದಿತ್ತು. ನಮ್ಮ ದೇಶದಲ್ಲಿ ೫ ತಿಂಗಳು ಆದರೂ ಸ್ಪೈಕ್ ಆಗಿಲ್ಲ. ನಮ್ಮ ಸರ್ಕಾರಗಳು ತೆಗೆದುಕೊಂಡ ನಿರ್ಧಾರಗಳಿಂದ ಕೊರೊನಾ ಕಂಟ್ರೋಲ್ ನಲ್ಲಿದೆ. ರಾಜ್ಯದಲ್ಲಿ ೭೦ ಕ್ಕೂ ಹೆಚ್ಚು ಲ್ಯಾಬ್ ಗಳನ್ನ ಸ್ಥಾಪಿಸಲಾಗಿದೆ. ನಾಲ್ಕು ಲಕ್ಷ ಕೊರೊನಾ ಟೆಸ್ಟ್ ಗಳನ್ನ ಈಗಾಗಲೇ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರು ಸಹಕಾರ ಕೊಟ್ಟರೆ ಕರ್ನಾಟಕದಲ್ಲಿ ಸ್ಪೈಕ್ ಆಗಲ್ಲ. ಲಾಕ್ ಡೌನ್ ಮುಕ್ತ ಮಾಡಿದಾಕ್ಷಣ ಕೊರೊನಾ ಮುಕ್ತ ಆಗೋದಿಲ್ಲ ಎಂದು ಸಚಿವರು ಹೇಳಿದರು.