ಜಾತ್ರೆಗಿಂತ ಕಡೆಯಾದ ಪಿಯುಸಿ ಪರೀಕ್ಷಾ ಕೇಂದ್ರ.. ಪೊಲೀಸರ,ಶಾಲೆಯವರ ಚೆಲ್ಲಾಟ..ಪೋಷಕರಿಗೆ ಪ್ರಾಣ ಸಂಕಟ..

ಜಾತ್ರೆಗಿಂತ ಕಡೆಯಾದ ಪಿಯುಸಿ ಪರೀಕ್ಷಾ ಕೇಂದ್ರ.. ಪೊಲೀಸರ,ಶಾಲೆಯವರ ಚೆಲ್ಲಾಟ..ಪೋಷಕರಿಗೆ ಪ್ರಾಣ ಸಂಕಟ..
No Social Distancing At Kolar
ಜಾತ್ರೆಗಿಂತ ಕಡೆಯಾದ ಪಿಯುಸಿ ಪರೀಕ್ಷಾ ಕೇಂದ್ರ.. ಪೊಲೀಸರ,ಶಾಲೆಯವರ ಚೆಲ್ಲಾಟ..ಪೋಷಕರಿಗೆ ಪ್ರಾಣ ಸಂಕಟ..
ಜಾತ್ರೆಗಿಂತ ಕಡೆಯಾದ ಪಿಯುಸಿ ಪರೀಕ್ಷಾ ಕೇಂದ್ರ.. ಪೊಲೀಸರ,ಶಾಲೆಯವರ ಚೆಲ್ಲಾಟ..ಪೋಷಕರಿಗೆ ಪ್ರಾಣ ಸಂಕಟ..
ಜಾತ್ರೆಗಿಂತ ಕಡೆಯಾದ ಪಿಯುಸಿ ಪರೀಕ್ಷಾ ಕೇಂದ್ರ.. ಪೊಲೀಸರ,ಶಾಲೆಯವರ ಚೆಲ್ಲಾಟ..ಪೋಷಕರಿಗೆ ಪ್ರಾಣ ಸಂಕಟ..

ಕೋಲಾರ: ಕೊರೊನಾದಿಂದ ಮಾರ್ಚ್ನಲ್ಲಿ ರದ್ದಾಗಿದ್ದ ಇಂಗ್ಲಿಷ್ ಪರೀಕ್ಷೆ ತೀವ್ರ ಕಟ್ಟೆಚ್ಚರದ ಮಧ್ಯೆ ನಡೆಯಿತು.
ಸದ್ಯ ಬೆಳಗ್ಗೆ ೧೦.೧೫ಕ್ಕೆ ಪರೀಕ್ಷೆ ಪ್ರಾರಂಭವಾದ ಪರೀಕ್ಷಾಗೂ ಮುನ್ನ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲಾಗಿತ್ತು.
ವಿಶೇಷವಾಗಿ ಸ್ಯಾನಿಟೈಸರ್, ಸಾಮಾಜಿಕ ಅಂತರ, ಥರ್ಮಲ್ ಸ್ಕ್ರೀನಿಂಗ್, ಬಸ್ ವ್ಯವಸ್ಥೆ ಸೇರಿದಂತೆ ಎಲ್ಲ ಸೌಲಭ್ಯ ಕಲ್ಪಿಸಲಾಗಿತ್ತು.
ಆದರೆ ಕೋಲಾರ ನಗರದ ಮಹಿಳಾ ಸಮಾಜ ಶಾಲೆ ಪರೀಕ್ಷಾ ಕೇಂದ್ರ ಮಾತ್ರ ಯಾವುದೇ ಜಾತ್ರೆ ನಡೆಯುವ ಸ್ಥಳಕ್ಕಿಂತ ಕಡಿಮೆಯಾಗಿತ್ತು.
ಯಾಕಂದ್ರೆ ಈ ಮಹಿಳಾ ಸಮಾಜ ಶಾಲೆ ಪರೀಕ್ಷಾ ಕೇಂದ್ರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಇಲ್ವೇ ಇಲ್ಲಾ,ಜೊತೆಗೆ ಸಾಮಾಜಿಕ ಅಂತರ ಮೊದಲೇ ಇರಲಿಲ್ಲ.ಹೀಗಾಗಿ ವಿದ್ಯಾರ್ಥಿಗಳ ಪರಿಸ್ಥಿತಿಯಂತ್ತು ಹೇಳ ತೀರದಾಗಿತ್ತು.
ಇದಲ್ಲದೆ, ಇಷ್ಟು ದಿನ ಮಕ್ಕಳನ್ನು ಮನೆಯಲ್ಲೇ ಕಾಪಾಡಿಕೊಂಡು ಬಂದಿದ್ದ ಪೋಷಕರಲ್ಲಿ ಆತಂಕ ಒಂದು ಕಡೆಯಾದರೇ, ವಿಧ್ಯಾರ್ಥಿಗಳ ಜೀವದ ಜೊತೆ ಈ ಶಾಲಾ ಆಡಳಿತ ಮಂಡಳಿ ಚೆಲ್ಲಾಟವಾಡ್ತಿರೋದು ಇನ್ನೊಂದು ಕಡೆಯಾಗಿತ್ತು.
ವಿಪರ್ಯಾಸವೆಂದರೆ ಹಲವು ಪೋಷಕರು ಯಾಕಾದ್ರು ಪರೀಕ್ಷೆ ನಡೆಸುತ್ತಿದ್ದಾರೋ ಅನ್ನೋ ಆತಂಕ ವ್ಯಕ್ತಪಡಿಸುತ್ತಿದ ಘಟನೆಯೂ ನಡೆಯುತು.ಜೊತೆಗೆ ಈ ಶಾಲೆ ಪಕ್ಕದಲ್ಲೇ ಇದೆ ಜಿಲ್ಲಾ ಕೋವಿಡ್ ಆಸ್ಪತ್ರೆ ಬೇರೆ ಇರುವ ಕಾರಣ ಎಚ್ಚರಿಕೆವಹಿಸಬೇಕಾದ ಪೊಲೀಸರು ಮಾತ್ರ ಕಣ್ಣಿದ್ದು ಕುರುಡರಂತ್ತೆ ವರ್ತಿಸಿದ್ದಾರೆ.