ಪ್ರಧಾನಿಗೆ ರಾಜ್ಯದ ಮಾಹಿತಿ ಕೊಟ್ಟ ಸಿಎಂ..

ಪ್ರಧಾನಿಗೆ ರಾಜ್ಯದ ಮಾಹಿತಿ ಕೊಟ್ಟ ಸಿಎಂ..
ರಾಜ್ಯದ ಮಾಹಿತಿ ಕೊಟ್ಟ ಸಿಎಂ..

ಬೆAಗಳೂರು: ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಸಂವಾದ ನಡೆಸಿದ್ದು, ರಾಜ್ಯದಿಂದಲೂ ಸಿಎಂ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿದ್ರು.
ಸದ್ಯ ವಿಡಿಯೋ ಕಾನ್ಫರೆನ್ಸ್ ವೇಳೆ ರಾಜ್ಯದಲ್ಲಿ ಈವರೆಗೆ ಕೈಗೊಂಡಿರುವ ಮುಂಜಾಗ್ರತಾ ಕ್ರಮ, ಲಾಕ್‌ಡೌನ್ ಸಡಿಲಿಕೆ ನಂತರದ ಬೆಳವಣಿಗೆ, ಕೃಷಿ ಸೇರಿದಂತೆ ಕೆಲ ಕ್ಷೇತ್ರಕ್ಕೆ ನೀಡಿರುವ ವಿನಾಯಿತಿ ನಂತರದ ಬೆಳವಣಿಗೆ ಬಗ್ಗೆ ಸಿಎಂ ಪ್ರಧಾನಿಯವರ ಗಮನಕ್ಕೆ ತಂದರು ಎನ್ನಲಾಗಿದೆ.
ಇನ್ನು ಗೃಹ ಕಚೇರಿ ಕೃಷ್ಣಾದಿಂದ ಪ್ರಧಾನಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ನಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಸಚಿವ ಸುರೇಶ್ ಕುಮಾರ್ ಭಾಗಿಯಾಗಿದ್ರು..