ಕರ್ನಾಟಕದಲ್ಲಿ 14 ರಂದೇ ಲಾಕ್‌ಡೌನ್ ಮುಕ್ತಾಯ..

ಕರ್ನಾಟಕದಲ್ಲಿ 14 ರಂದೇ ಲಾಕ್‌ಡೌನ್ ಮುಕ್ತಾಯ..
ಲಾಕ್‌ಡೌನ್ ಮುಕ್ತಾಯ..

ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್ ಮುಕ್ತಾಯದ ಬಗ್ಗೆ ರಾಜ್ಯದ ಜನರಿಗಿದ್ದ ಕಾತುರಕ್ಕೆ ಕೊನೆಗೂ ತೆರೆ ಬಿದ್ದಿದೆ.
ಈ ಸಂಬAಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದ್ದು,  ಕೋವಿಡ್-೧೯ರ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್ ಅವಧಿಯೂ ಇದೇ ೧೪ರಂದು ಮುಕ್ತಾಯಗೊಳ್ಳಲಿದೆ ಅಂತ ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ,ಇದಾದ ನಂತರ ರಾಜ್ಯ ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು,ಪ್ರಧಾನ ಕಾರ್ಯದರ್ಶಿಗಳು,ಕಾರ್ಯದರ್ಶಿಗಳು ತಮ್ಮ ಅಧೀನದಲ್ಲಿರುವ ಇಲಾಖೆಗಳಲ್ಲಿ ತೆಗೆದುಕೊಳ್ಳಬೇಕಾಗಿರುವ ಪ್ರಮುಖ ೧೦ ಕ್ರಮಗಳ ಬಗ್ಗೆ ಇದೇ ೯ರೊಳಗೆ ಮಾಹಿತಿ ಕಳುಹಿಸಬೇಕೆಂದು ಆದೇಶ ಹೊರಡಿಸಿದ್ದಾರೆ.