ಮಾಸ್ಕ್ ಡೇಗೆ ಸಿಎಂ ಬಿಎಸ್‌ವೈ ಚಾಲನೆ.. ಅಪ್ಪು,ರಾಗಿಣಿ,ಅನಿಲ್ ಕುಂಬ್ಳೆ ಹಾಜರ್

ಮಾಸ್ಕ್ ಡೇಗೆ ಸಿಎಂ ಬಿಎಸ್‌ವೈ ಚಾಲನೆ.. ಅಪ್ಪು,ರಾಗಿಣಿ,ಅನಿಲ್ ಕುಂಬ್ಳೆ ಹಾಜರ್
ಮಾಸ್ಕ್ ಡೇಗೆ ಸಿಎಂ ಬಿಎಸ್‌ವೈ ಚಾಲನೆ
ಮಾಸ್ಕ್ ಡೇಗೆ ಸಿಎಂ ಬಿಎಸ್‌ವೈ ಚಾಲನೆ.. ಅಪ್ಪು,ರಾಗಿಣಿ,ಅನಿಲ್ ಕುಂಬ್ಳೆ ಹಾಜರ್

ಬೆಂಗಳೂರು: ಕೊರೊನಾ ನಿಯಂತ್ರಿಸಲು ಬಳಸುವ ಪ್ರಮುಖ ಸಾಧನ ಮಾಸ್ಕ್. ಹೀಗಾಗಿ ಮಾಸ್ಕ್ ಕುರಿತು ರಾಜ್ಯದ ಜನರಿಗೆ ಜಾಗೃತಿ ಮೂಡಿಸಲು ಸ್ವತಃ ಸಿಎಂ ಯಡಿಯೂರಪ್ಪ ಮಾಸ್ಕ್ ಡೇ ಆಚರಣೆ ಹಾಗೂ ಜಾಗೃತಿ ನಡಿಗೆಯಲ್ಲಿ ಪಾಲ್ಗೊಂಡರು.
ಅAದ ಹಾಗೇ ವಿಧಾನಸೌಧ ಮುಂಭಾಗ ಪೊಲೀಸ್ ಪಥ ಸಂಚಲನ ಹಾಗೂ ಜಾಗೃತಿ ನಡಿಗೆಗೆ ಚಾಲನೆ ನೀಡಿ, ಹಡ್ಸನ್ ವೃತ್ತದವರೆಗೆ ಸಚಿವರು ಹಾಗೂ ಗಣ್ಯರ ಜೊತೆ ಸಿಎಂ ಕೂಡಾ ಕಾಲ್ನಡಿಗೆಯಲ್ಲಿ ಬಂದರು. 
ನಟ ಪುನೀತ್ ರಾಜ್ ಕುಮಾರ್, ನಟಿ ರಾಗಿಣಿ ದ್ವಿವೇದಿ, ಕ್ರಿಕೆಟಿಗ ಅನಿಲ್ ಕುಂಬ್ಳೆ, ಸಚಿವ ಡಾ. ಕೆ. ಸುಧಾಕರ್ ಸೇರಿದಂತೆ ಹಲವು ಗಣ್ಯರು ಸಿಎಂಗೆ ಸಾಥ್ ನೀಡಿದರು.
ಆದ್ರೆ, ಗಣ್ಯರು ಹಾಗೂ ಭದ್ರತಾ ಸಿಬ್ಬಂದಿ ಸಂಖ್ಯೆ ಹೆಚ್ಚಾಗಿದ್ದರಿಂದ ಸಾಮಾಜಿಕ ಅಂತರ ಕಾಪಾಡುವಲ್ಲಿ ಕಾರ್ಯಕ್ರಮ ವಿಫಲವಾಯಿತು. ಜನ ಗುಂಪು ಗುಂಪಾಗಿಯೇ ನಡೆದು ಬಂದರು.