ಚೀನಾ ದಾಳಿ ಎದುರಿಸಲು ಭಾರತ ಸನ್ನದ್ಧ; ಸಚಿವ ಕೆ.ಗೋಪಾಲಯ್ಯ

ಚೀನಾ ದಾಳಿ ಎದುರಿಸಲು ಭಾರತ ಸನ್ನದ್ಧ; ಸಚಿವ ಕೆ.ಗೋಪಾಲಯ್ಯ
ಪರಿಷತ್ ಟಿಕೆಟ್; ಇನ್ನೇರಡು ದಿನಗಳಲ್ಲಿ ತೀರ್ಮಾನ..
ಚೀನಾ ದಾಳಿ ಎದುರಿಸಲು ಭಾರತ ಸನ್ನದ್ಧ; ಸಚಿವ ಕೆ.ಗೋಪಾಲಯ್ಯ

ಹಾಸನ:ನೆರೆಯ ದೇಶ ಚೀನಾ ದಾಳಿ ಎದುರಿಸಲು ಭಾರತ ಸನ್ನದ್ಧವಾಗಿದೆ ಎಂದು ಆಹಾರ ಖಾತೆ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಪಿಯುಸಿ ಹಾಗೂ ಎಸ್ ಎಸ್ ಎಲ್‌ಸಿ ಪರೀಕ್ಷೆ ಪೂರ್ವ ತಯಾರಿ ಕುರಿತು ಜಿಲ್ಲಾಧಿಕಾರಿ ಆರ್.ಗಿರೀಶ್ ,  ಎಸ್‌ಪಿ ಆರ್. ಶ್ರೀನಿವಾಸ ಗೌಡ ಸೇರಿ ಇತರೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪ್ರಧಾನಿ ಸಮರ್ಥರಿದ್ದಾರೆ.ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಮಾಡಲಿದ್ದಾರೆ.ಮೋದಿ ಅವರು ವಿಶ್ವದ ನಾಯಕ, ಇಡೀ ಜಗತ್ತು ಅವರನ್ನು ಕೊಂಡಾಡುತ್ತಿದೆ ಎಂದರು.
ಇನ್ನು ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಮಾತನಾಡಿದ ಅವರು,ಮುಖ್ಯಮಂತ್ರಿಗಳು ಒಳ್ಳೇ ನಿರ್ಧಾರ ಕೈಗೊಳ್ಳಲಿದ್ದಾರೆ.ಕೋರ್ ಕಮಿಟಿಗೆ ಹಲವರ ಹೆಸರು ಬಂದಿದೆ, ಈ ಬಗ್ಗೆ ವರಿಷ್ಠರು ತೀರ್ಮಾನ ಮಾಡಲಿದ್ದಾರೆ ಎಂದರಲ್ಲದೆ, ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್‌ಗೆ ಟಿಕೆಟ್ ನೀಡಲು ನನ್ನ ಬೆಂಬಲ ಇದೆ.ಉಳಿದಂತೆ ಸಣ್ಣಪುಟ್ಟ ಗೊಂದಲ ಇದ್ದರೆ ಸರಿ ಪಡಿಸಲಾಗುವುದು.ಇನ್ನೆರಡು ದಿನಗಳಲ್ಲಿ ಎಲ್ಲವೂ ತೀರ್ಮಾನವಾಗಲಿದೆ ಎಂದು ತಿಳಿಸಿದರು.
ಇದೇ ವೇಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವ ತಯಾರಿ ಬಗ್ಗೆ ಪ್ರತಿಕ್ರಿಯೆ ನೀಡಿ, ಎಸ್‌ಎಸ್‌ಎಲ್‌ಸಿ ಮಕ್ಕಳು ಧೈರ್ಯವಾಗಿ ಪರೀಕ್ಷೆ ಬರೆಯಿರಿ.ನಿಮ್ಮೊಂದಿಗೆ ಸರ್ಕಾರ ಇದೆ, ಪೋಷಕರು ಮಕ್ಕಳು ಆತಂಕಗೊಳ್ಳೋದು ಬೇಡ. ಹಾಸನ ಜಿಲ್ಲೆಗೆ ಕಳೆದ ಬಾರಿಯಂತೆ ಈ ಸಲವೂ ಉತ್ತಮ ಫಲಿತಾಂಶ ಬರಲಿದೆ ಎಂದು ತಿಳಿಸಿದರು.
ಇದುವರೆಗೂ ಹಾಸನ ಜಿಲ್ಲೆಯಲ್ಲಿ ೩೦೦ ಚೀಲ ಅಕ್ಕಿ ಪತ್ತೆ ಪ್ರಕರಣ ಬಯಲಿಗೆ ಬಂದಿದ್ದು,ಪಡಿತರ ಅಕ್ಕಿ ಸಿಕ್ಕ ತಕ್ಷಣ ಗೋದಾಮು 
ಚೆಕ್ ಮಾಡಿಸಲಾಗುವುದು.ಜೊತೆಗೆ ಅಕ್ರಮವಾಗಿ ಧಾನ್ಯ ಶೇಖರಣೆ ಮಾಡಿರುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚನೆ ನೀಡಲಾಗಿದ್ದು,ದಾಖಲೆ ಇಲ್ಲದೇ ಇದ್ದರೆ ಅದು ನಮ್ಮ ಅಕ್ಕಿಯಾಗಿರುತ್ತದೆ.ಹೀಗಾಗಿ ಇದರ ಬಗ್ಗೆ ಪರಿಶೀಲಿಸಲು ಡಿಸಿಗೆ ಆದೇಶಿಸಿರೋದಾಗಿ ತಿಳಿಸಿದರು.
ಇನ್ನು ಭೂ ಸುಧಾರಣೆ ಕಾಯ್ದೆ ಜಾರಿ ಸಂಬAಧ ಸಿಎಂ ಎಲ್ಲರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದಷ್ಟೆ ಉತ್ತರಿಸಿದರು.