ಎಂಟಿಬಿ ನಾಗರಾಜ್ ಸೇರಿ ನಾಲ್ವರಿಗೆ ಪರಿಷತ್ ಸ್ಥಾನ ಕೊಡಿ..

ಎಂಟಿಬಿ ನಾಗರಾಜ್ ಸೇರಿ ನಾಲ್ವರಿಗೆ ಪರಿಷತ್ ಸ್ಥಾನ ಕೊಡಿ..
ನಾಲ್ವರಿಗೆ ಪರಿಷತ್ ಸ್ಥಾನ ಕೊಡಿ..

ಚಿತ್ರದುರ್ಗ :ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್,ಆರ್. ಶಂಕರ್, ರೋಷನ್ ಬೇಗ್‌ಗೆ ಪರಿಷತ್ ಸ್ಥಾನ ಕೊಡಬೇಕು ಎಂದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಒತ್ತಾಯಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಇವರೆಲ್ಲರಿಗೂ ಎಂಎಲ್‌ಸಿ ಸ್ಥಾನ ನೀಡಬೇಕು. ಸಚಿವ ಕೆ.ಎಸ್. ಈಶ್ವರಪ್ಪ ಅವರ ಬಳಿ ಈಗಲೂ ಮಾತನಾಡಿದ್ದು,ಸೋಮವಾರ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ಆಗುತ್ತದೆ ಎಂದು ಹೇಳಿದರು.
ಅಲ್ಲದೆ, ಮುನಿರತ್ನ ಹಾಗು ಪ್ರತಾಪ್ ಗೌಡ ಪಾಟೀಲ್ ಎಂಎಲ್‌ಎ ಚುನಾವಣೆಗೆ ಸ್ಪರ್ಧಿಸುತ್ತಾರೆ.ಈ ವಿಚಾರವಾಗಿ ಸಿಎಂ ಬಿಎಸ್‌ವೈ ಜೊತೆ ಮಾತನಾಡಿದ್ದೇವೆ ಎಂದು ಹೇಳಿದರು.
ಇನ್ನು ನಮ್ಮ ಜೊತೆ ಬಂದವರು ಯಾರೂ ಮಾತೃ ಪಕ್ಷಕ್ಕೆ ಹೋಗುವ ಮಾತಿಲ್ಲ.ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆಯಂತೆ ವಿಧಾನ ಪರಿಷತ್‌ನಲ್ಲಿ ಆಗುವುದಿಲ್ಲ.ರಾಜ್ಯದ ನಾಯಕರ ತೀರ್ಮಾನವೇ ಅಂತಿಮ ಆಗುತ್ತದೆ.ನಮಗೆ ಕೊಟ್ಟಂತ ಮಾತನ್ನು ನೂರಕ್ಕೆ ನೂರರಷ್ಟನ್ನು ಸಿಎಂ ಈಡೇರಿಸಿದ್ದಾರೆ ಎಂದು ತಿಳಿಸಿದರು.