ಪೊಲೀಸರ ತ್ಯಾಗ, ಸೇವೆ ಸದಾ ಸ್ಮರಣೀಯ : ಪ್ರಧಾನಿ ಮೋದಿ

Narendra Modi

ಪೊಲೀಸರ ತ್ಯಾಗ, ಸೇವೆ ಸದಾ ಸ್ಮರಣೀಯ : ಪ್ರಧಾನಿ ಮೋದಿ

ನವದೆಹಲಿ : ಇಂದು ದೇಶಾದ್ಯಂತ ಪೊಲೀಸ್ ಸಂಸ್ಮರನಾ ದಿನ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪೊಲೀಸರ ಸಾಹಸ ಹಾಗೂ ತ್ಯಾಗವನ್ನು ಕೊಂಡಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವುದರಿಂದ ಹಿಡಿದು ಭಯಾನಕ ಅಪರಾಧ ಪ್ರಕರಣಗಳನ್ನು ಬಗೆಹರಿಸುವವರೆಗೆ, 
ವಿಪತ್ತು ನಿರ್ವಹಣೆಗೆ ಸಹಾಯ ಮಾಡುವುದರಿಂದ ಹಿಡಿದು ಕೋವಿಡ್ ೧೯ ವಿರುದ್ಧ ಹೋರಾಡುವವರೆಗೆ, ಯಾವುದೇ ಹಿಂಜರಿಕೆಯಿಲ್ಲದೆ ನಮ್ಮ ಪೊಲೀಸ್ ಸಿಬ್ಬಂದಿಗಳು ಅತ್ಯುತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ.
 ಅವರ ಸಮರ್ಪಣೆ ಮತ್ತು ಸರ್ವ ಸನ್ನದ್ಧತೆಯ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.
ಪೊಲೀಸ್ ಸಂಸ್ಮರಣೆ ದಿನವು ನಮ್ಮ ಪೊಲೀಸ್ ಸಿಬ್ಬಂದಿಗೆ ಮತ್ತು ಅವರ ಕುಟುಂಬಗಳಿಗೆ ಭಾರತದಾದ್ಯಂತ ಕೃತಜ್ಞತೆಯನ್ನು ಸಲ್ಲಿಸುವುದಕ್ಕಾಗಿದೆ. 
ಕರ್ತವ್ಯದ ವೇಳೆ ಹುತಾತ್ಮರಾದ ಎಲ್ಲ ಪೊಲೀಸ್ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಅವರ ತ್ಯಾಗ, ಸೇವೆ ಸದಾ ಸ್ಮರಣೀಯ ಎಂದು ಟ್ವೀಟ್ ಮಾಡಿದ್ದಾರೆ.