ಗೌರಿಬಿದನೂರಿನ ಹುಲಿಕುಂಟೆ ಬಳಿ ಮಹಿಳೆ ಕೊಲೆ

ಗೌರಿಬಿದನೂರಿನ ಹುಲಿಕುಂಟೆ ಬಳಿ ಮಹಿಳೆ ಕೊಲೆ
ಹುಲಿಕುಂಟೆ ಬಳಿ ಮಹಿಳೆ ಕೊಲೆ
ಗೌರಿಬಿದನೂರಿನ ಹುಲಿಕುಂಟೆ ಬಳಿ ಮಹಿಳೆ ಕೊಲೆ

ಚಿಕ್ಕಬಳ್ಳಾಪುರ : ಜಿಲ್ಲೆಯ ಗೌರಿಬಿದನೂರಿನ ಹುಲಿಕುಂಟೆ ಗ್ರಾಮದ ಹೊರವಲಯದಲ್ಲಿರುವ ಕುಂಟೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.
ಸೊಂಟಕ್ಕೆ ಕಲ್ಲು ಕಟ್ಟಿ ಕುಂಟೆಗೆ ಬಿಸಾಡಿ ಮಹಿಳೆಯನ್ನು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ನಿನ್ನೆ ಸುರಿದ ಭಾರಿ ಮಳೆಯಿಂದ ರಭಸವಾಗಿ ಬಂದ ನೀರಿನ ಹೊಡೆತಕ್ಕೆ ಶವ ತೇಲಿ ಹೊರ ಬಂದಿದ್ದು, ಗ್ರಾಮಸ್ಥರ ಕಣ್ಣಿಗೆ ಕಾಣಿಸಿಕೊಂಡಿದೆ.

ಬಳಿಕ ವಿಷಯ ತಿಳಿದ ಸಿಪಿಐ ರವಿ ಹಾಗೂ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸೈ ಮೋಹನ್ ಕುಮಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಕೈಗೊಂಡರು.
ಇದೇ ವೇಳೆ ಮಹಿಳೆಯ ಹಂತಕರಿಗಾಗಿ ಬಲೆ ಬೀಸಿರುವ ಪೊಲೀಸರು, ಮಹಿಳೆಯ ಗುರುತನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಿದ್ದಾರೆ.