ಸರ್ಕಾರ ಭೂಸುಧಾರಣೆ ಕಾಯ್ದೆ ರದ್ದುಗೊಳಿಸಲು ರೈತ ಸಂಘ ಆಗ್ರಹ

ಸರ್ಕಾರ ಭೂಸುಧಾರಣೆ ಕಾಯ್ದೆ ರದ್ದುಗೊಳಿಸಲು ರೈತ ಸಂಘ ಆಗ್ರಹ
ರೈತ ಸಂಘದ ಪ್ರತಿಭಟನೆ

ಯಾದಗಿರಿ: ರಾಜ್ಯ ಸರ್ಕಾರ ರಾಜ್ಯದಲ್ಲಿ ಹೊಸದಾಗಿ ಕರ್ನಾಟಕ ಭೂಸುಧಾರಣೆ ಕಾಯ್ದೆ ತರಲು ತಿರ್ಮಾನಿಸಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ನೇತಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರ ಕಾಯ್ದೆ ವಾಪಾಸ್ಸು ಪಡೆಯಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟ,ಒAದು ವೇಳೆ ಈ ಕಾಯ್ದೆ ಜಾರಿಯಾದರೆ ಸಣ್ಣ ಹಿಡುವಳಿ ರೈತರ ಸಮೀನು ಬಂಡವಾಳ ಶಾಹಿಗಳ ಪಾಲಾಗುತ್ತದೆ. ಇದರಿಂದ ರೈತಾಪಿ ವರ್ಗ ಬೀದಿಗೆ ಬರುತ್ತದೆ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಈ ಮೊದಲು ಜಾರಿಯಲ್ಲಿದ್ದ ಕರ್ನಾಟಕದ ಭೂಸುಧಾರಣೆ ಕಾಯ್ದೆ ರದ್ದು ಮಾಡಬಾರದು.ಜೊತೆಗೆ ಗ್ರಾಮೀಣ ಭಾಗದಲ್ಲಿ ಬಗರ್ ಹುಕುಂ ಸಾಗುವಳಿ ರೈತರಿಗೆ ಸರ್ಕಾರ ಪಟ್ಟ ಪಾಣಿ ವಿತರಿಸಬೇಕು.ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾಯ್ದೆ ಯನ್ನು ತಿದ್ದುಪಡಿ ಮಾಡಬಾರದು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಮಹಿಳಾ ಘಟಕದ ಕಾರ್ಯದರ್ಶಿ ನಾಗರತ್ನ ಪಾಟೀಲ್, ಜಿಲ್ಲಾದ್ಯಕ್ಷ ಶರಣಗೌಡ ಮದ್ರಕಿ, ಸಿದ್ದಣ್ಣ ಮೇಟಿ, ಚಂದ್ರಕಲಾ ವಡಗೇರಿ,ಮುದಣ್ಣ ಅಮ್ಮಪೂರ್, ಸಿದ್ದು, ಮಲ್ಕಣ್ಣ, ಶಹಾಪುರ್, ಚನ್ನಾಮಲ್ಲಿಕಾರ್ಜುನ, ವೀರಸಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.