ಸಾಲಬಾಧೆ; ರೈತ ಆತ್ಮಹತ್ಯೆ

ಸಾಲಬಾಧೆ; ರೈತ ಆತ್ಮಹತ್ಯೆ
ಶಾಸಕರ ಪೋಟೋ ಫೋಸ್
ಸಾಲಬಾಧೆ; ರೈತ ಆತ್ಮಹತ್ಯೆ

ತುಮಕೂರು: ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತನ ಮೃತ ದೇಹದ ಎದುರು  ಶಾಸಕ ಸತ್ಯನಾರಾಯಣ್ ಪೋಟೋ ಫೋಸ್ ನೀಡಿ ಕ್ಷೇತ್ರದ ಜನತೆಯ ಕೋಪಕ್ಕೆ ತುತ್ತಾಗಿದ್ದಾರೆ. ಶಿರಾ ತಾಲ್ಲೂಕಿನ ದೇವರಹಳ್ಳಿ ಗ್ರಾಮದ ೬೦ ವರ್ಷದ ಗಂಗಾಧರ್ ಆತ್ಮಹತ್ಯೆ ಮಾಡಿಕೊಂಡ ರೈತ.
ಮೃತ  ರೈತ ಗಂಗಾಧರ್  ೪.೪೦ ಲಕ್ಷ ಕೈ ಸಾಲ ಮಾಡಿಕೊಂಡು, ಸಾಲ ತೀರಿಸಲಾಗದೆ ನಿನ್ನೆ ರಾತ್ರಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಗ್ರಾಮಕ್ಕೆ ತೆರಳಿದ ಶಾಸಕ ಸತ್ಯನಾರಾಯಣ್  ಮರದಲ್ಲೇ ನೇತಾಡುತ್ತಿದ್ದ ಮೃತ ದೇಹದ ಮುಂದೆ  ಪೋಟೋ ಪೋಸ್ ನೀಡಿದ್ದಾರೆ. ಮೃತ ರೈತರಿಗೆ ಇಬ್ಬರು ಮಕ್ಕಳಿದ್ದಾರೆ. ಈತ ೪.೧೭ ಎಕರೆ ಜಮೀನು ಹೊಂದಿದ್ದಾರೆ. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.