ಕೋಟಿಗೊಬ್ಬ-೩ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಬಿಡುಗಡೆ

ಕೋಟಿಗೊಬ್ಬ-೩ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಬಿಡುಗಡೆ
ಕೋಟಿಗೊಬ್ಬ-೩ ಚಿತ್ರದ ವಿಡಿಯೋ

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ-೩ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. 
ಇದಕ್ಕಾಗಿ ಸುದೀರ್ಘ ಸಮಯದಿಂದ ಕಾಯುತ್ತಿದ್ದ ಅಭಿಮಾನಿಗಳು ಖುಷಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೋಟಿಗೊಬ್ಬನದ್ದೇ ಹಬ್ಬ ಶುರುವಾಗಿದೆ. ಲಿರಿಕಲ್ ವಿಡಿಯೋದ ಲಿಂಕ್ ಹಂಚಿಕೊAಡು, ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ.
ಆಕಾಶಾನೆ ಅದರಿಸುವ ಈ ಭೂಮಿಯನ್ನೇ ಪಳಗಿಸುವ, ಕೋಟಿ ಕೋಟಿ ನೋಟುಗಳ ಕೋಟೆಯ ಮೇಲೆ ಕುಳಿತಿರುವ..ನಾಲ್ಕು ತಲೆ ಬ್ರಹ್ಮನಿಗೂ ಅಬ್ಬಬ್ಬಾ ಕನ್‌ಫ್ಯೂಸು ಮಾಡೋನಿವಾ...ಹಾಡು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮುದ ನೀಡುತ್ತಿದೆ.
ಕೋಟಿಗೊಬ್ಬ-೩ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಆಕಾಶಾನೆ... ಸೋಮವಾರ ಬೆಳಿಗ್ಗೆ ಹತ್ತು ಗಂಟೆಗೆ ಬಿಡುಗಡೆಯಾಗಲಿದೆ ಎಂಬ ಸುದ್ದಿ ತಿಳಿದಾಗಿನಿಂದ ಕಿಚ್ಚ ಅಭಿಮಾನಿಗಳು ಕಾತರದಿಂದ ಕಾದಿದ್ದರು. 
ಇನ್ನೂ ಲಿರಿಕಲ್ ವಿಡಿಯೋದ ಪ್ರೀಮಿಯರ್ ಲಿಂಕ್ ಹಂಚಿಕೊAಡಿಲ್ಲ ಎಂದು ಆನಂದ್ ಆಡಿಯೋ ಕಂಪೆನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಆದರೆ ಹೇಳಿದ ಸಮಯಕ್ಕೆ ಸರಿಯಾಗಿ ಹಾಡು ಹೊರಬಂದಿದೆ.