ಬಾಲ್ಯದ ಗೆಳೆಯನ ಜೊತೆ ಮದುವೆಯಾದ ಮಯೂರಿ

ಬಾಲ್ಯದ ಗೆಳೆಯನ ಜೊತೆ ಮದುವೆಯಾದ ಮಯೂರಿ
ಮದುವೆಯಾದ ಮಯೂರಿ
ಬಾಲ್ಯದ ಗೆಳೆಯನ ಜೊತೆ ಮದುವೆಯಾದ ಮಯೂರಿ
ಬಾಲ್ಯದ ಗೆಳೆಯನ ಜೊತೆ ಮದುವೆಯಾದ ಮಯೂರಿ

ಬೆಂಗಳೂರು : ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದ ನಟಿ ಮಯೂರಿ ಶುಕ್ರವಾರ (ಜೂ.12) ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ಅರುಣ್‌ ಜೊತೆ ಬೆಂಗಳೂರಿನ ಜೆಪಿ ನಗರದ ಶ್ರೀ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ  ಸಪ್ತಪದಿ ತುಳಿದಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿದ್ದ ಅವರು ಬಳಿಕ ಚಂದನವನದಲ್ಲೂ ಖ್ಯಾತಿ ಗಳಿಸಿದ್ದರು.

ವಿವಾಹದ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, 'ಹೌದು, ನಾನು ಮದುವೆ ಆಗಿದ್ದೇನೆ. ನಮ್ಮ 10 ವರ್ಷದ ಗೆಳೆತನಕ್ಕೆ ಇಂದು ಅರ್ಥ ಸಿಕ್ಕಿದೆ. ಸದ್ಯದಲ್ಲೇ ನಾವು ಹೆಚ್ಚಿನ ವಿಚಾರ ಹಂಚಿಕೊಳ್ಳುತ್ತೇವೆ ಅಂದಿದ್ದಾರೆ. ಜೊತೆಗೆ ಪುಟ್ಟದೊಂದು ವಿಡಿಯೋ ಕ್ಲಿಪ್ ಹಂಚಿಕೊಂಡಿದ್ದಾರೆ.

ಧಾರಾವಾಹಿ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸುವ ಅವಕಾಶ ಮಯೂರಿಗೆ ಸಿಕ್ಕಿತ್ತು. ಅಜಯ್‌ ರಾವ್‌ ಜೊತೆ ನಟಿಸಿದ 'ಕೃಷ್ಣ ಲೀಲಾ' ಚಿತ್ರದ ಮೂಲಕ ಅವರಿಗೆ ಭರ್ಜರಿ ಯಶಸ್ಸು ಸಿಕ್ಕಿತು. 'ಇಷ್ಟ ಕಾಮ್ಯ', 'ನಟರಾಜ ಸರ್ವೀಸ್‌', 'ಕರಿಯ 2' ಮುಂತಾದ ಸಿನಿಮಾಗಳಲ್ಲಿ ಮಯೂರಿ ನಟಿಸಿದ್ದಾರೆ. ಪ್ರಸ್ತುತ, ಅವರು ಅಭಿನಯಿಸಿರುವ 'ಮೌನಂ' ಮತ್ತು 'ಪೊಗರು' ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.