ಬಾಬ್ರಿ ಮಸೀದಿ ಧ್ವಂಸ ಪ್ರಕರಣ; 32 ಮಂದಿ ಆರೋಪಿಗಳು ನಿರ್ದೋಷಿಗಳು

ಬಾಬ್ರಿ ಮಸೀದಿ ಧ್ವಂಸ ಪ್ರಕರಣ; 32 ಮಂದಿ ಆರೋಪಿಗಳು ನಿರ್ದೋಷಿಗಳು
ಲಕ್ನೋ ಸಿಬಿಐ ವಿಶೇಷ ಕೋರ್ಟ್
ಬಾಬ್ರಿ ಮಸೀದಿ ಧ್ವಂಸ ಪ್ರಕರಣ; 32 ಮಂದಿ ಆರೋಪಿಗಳು ನಿರ್ದೋಷಿಗಳು
ಬಾಬ್ರಿ ಮಸೀದಿ ಧ್ವಂಸ ಪ್ರಕರಣ; 32 ಮಂದಿ ಆರೋಪಿಗಳು ನಿರ್ದೋಷಿಗಳು
ಬಾಬ್ರಿ ಮಸೀದಿ ಧ್ವಂಸ ಪ್ರಕರಣ; 32 ಮಂದಿ ಆರೋಪಿಗಳು ನಿರ್ದೋಷಿಗಳು

ನವದೆಹಲಿ:ಅಯೋಧ್ಯೆಯಲ್ಲಿ ೧೯೯೨ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಲಖನೌನ ಸಿಬಿಐ ವಿಶೇಷ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 
ಅಂದ ಹಾಗೇ ನ್ಯಾಯಾಧೀಶ ಎಸ್.ಕೆ.ಯಾದವ್ ತೀರ್ಪು ನೀಡಿದ್ದು, ಎಲ್ಲ ೩೨ ಆರೋಪಿಗಳೂ ತಪ್ಪಿತಸ್ಥರು ಅಲ್ಲ ಎಂದು ಘೋಷಿಸಿದ್ದಾರೆ. ಕಳೆದ ತಿಂಗಳು ವಿಚಾರಣೆ ಪೂರ್ಣಗೊಳಿಸಿದ್ದ ಕೋರ್ಟ್, ಇಂದಿಗೆ ತೀರ್ಪು ಕಾಯ್ದಿರಿಸಿತ್ತು.
ಇನ್ನು ತೀರ್ಪಿನಲ್ಲಿ ಈ ಘಟನೆ ಆಕಸ್ಮಿಕವಾಗಿ ನಡೆದಿರುವಂಥದ್ದು. ಬಾಬ್ರಿ ಮಸೀದಿಯ ಧ್ವಂಸ ಪೂರ್ವನಿಯೋಜಿತ ಕೃತ್ಯವಲ್ಲ. ಆರೋಪಿಗಳ ವಿರುದ್ಧ ಯಾವುದೇ ಪ್ರಬಲ ಸಾಕ್ಷ್ಯಗಳಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದಲ್ಲದೆ, ೨೮ ವರ್ಷಗಳ ಬಳಿಕ ಅಂತಿಮ ತೀರ್ಪು ಪ್ರಕಟಿಸಿದ ಕೋರ್ಟ್ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಡಾ.ಮುರಳಿ ಮನೋಹರ ಜೋಶಿ, ಉಮಾಭಾರತಿ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್ ಸೇರಿ ೩೨ ಆರೋಪಿಗಳನ್ನು ಖುಲಾಸೆಗೊಳಿಸಿ, ದೋಷಿಗಳು ಅಲ್ಲ ಎಂದು ತೀರ್ಪಿನಲ್ಲಿ ಪ್ರಕಟಿಸಿದೆ.
ಕಳೆದ ೧೯೯೨ ಡಿಸೆಂಬರ್ ೬ರಂದು ಸಾವಿರಾರು ಕರಸೇವಕರು ರಾಮನ ಜನ್ಮಭೂಮಿಯ ಮೇಲೆ ಬಾಬ್ರಿ ಮಸೀದಿಯಿದೆ ಎಂದು ಅದನ್ನು ಏಕಾಏಕಿ ಧ್ವಂಸಗೊಳಿಸಿದ್ದರು. ಅದಾದ ಬಳಿಕ ಭುಗಿಲೆದ್ದ ಹಿಂಸಾಚಾರದಲ್ಲಿ ಸುಮಾರು ೨,೦೦೦ ಮಂದಿ ಹತ್ಯೆಗೀಡಾಗಿದ್ದರು. ಹೀಗಾಗಿ ಧರ್ಮಗಳ ಆಧಾರದ ಮೇಲೆ ದ್ವೇಷ ಬಿತ್ತಿದ ಆರೋಪ, ಐಪಿಸಿ ಸೆಕ್ಷನ್ ೧೫೩(ಎ) ಅಡಿ ದ್ವೇಷ ಬಿತ್ತಿದ ಆರೋಪ, ೧೫೩ಬಿ ಅಡಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತಂದ ಆರೋಪ, ೧೨೦ಬಿ ಅಡಿ ಕ್ರಿಮಿನಲ್ ಒಳಸಂಚು ನಡೆಸಿದ ಆರೋಪ ಸೆಕ್ಷನ್‌ಗಳಡಿ ಆರೋಪಗಳನ್ನು ದಾಖಲಿಸಲಾಗಿತ್ತು.