ಭೂಸ್ವಾಧೀನ ಕಾಯ್ದೆ ಜಾರಿ: ನಾನು ಮಾತನಾಡಲ್ಲ,ಸಿಎಂ ಹೇಳ್ತಾರೆ..

ಭೂಸ್ವಾಧೀನ ಕಾಯ್ದೆ ಜಾರಿ: ನಾನು ಮಾತನಾಡಲ್ಲ,ಸಿಎಂ ಹೇಳ್ತಾರೆ..
ಸಚಿವ ಕೆ.ಗೋಪಾಲಯ್ಯ
ಭೂಸ್ವಾಧೀನ ಕಾಯ್ದೆ ಜಾರಿ: ನಾನು ಮಾತನಾಡಲ್ಲ,ಸಿಎಂ ಹೇಳ್ತಾರೆ..

ಹಾಸನ: ಹಾಸನ ಜಿಲ್ಲೆಯಲ್ಲಿ ಇಂದು ೫ ಪ್ರಕರಣ ಹೊಸದಾಗಿ ಪತ್ತೆಯಾಗಿದೆ ಎಂದು ಆಹಾರ ಖಾತೆ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಒಟ್ಟು ೨೪೯ ಕರೋನಾ ಪ್ರಕರಣ ದಾಖಲಾಗಿದೆ. ೧೯೨ ಮಂದಿ ಡಿಸ್ಚಾರ್ಜ್ ಆಗಿದ್ದು  ೫೭ ಕೇಸ್ ಆಕ್ಟೀವ್ ಆಗಿವೆ ಎಂದು ಮಾಹಿತಿ ನೀಡಿದರು.
ಇನ್ನು ಭೂಸ್ವಾಧೀನ ಕಾಯ್ದೆ ಜಾರಿ ಮಾಡಲು ಸರ್ಕಾರ ಮುಂದಾಗಿರುವ ವಿಚಾರ ಬಗ್ಗೆ ಮಾತನಾಡಿ,ಸಿಎಂ ಜೊತೆ ಈಗಾಗಲೇ ವಿಪಕ್ಷಗಳ ಸಭೆ ಮಾಡಿದ್ದಾರೆ,ಸಿಎಂ ಈ ಬಗ್ಗೆ ಮಾತನಾಡುತ್ತಾರೆ ನಾನು ಚಿಕ್ಕವನು ಈ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದರು.
ಇದಲ್ಲದೆ,ಬಿಪಿಎಲ್ ಕಾರ್ಡ್ ಇದ್ದು,ಟ್ಯ್ರಾಕ್ಟರ್ ಇರುವವರಿಗೆ ಪಡಿತರ ಅಕ್ಕಿ ಕೊಡಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು,ಹಿಂದಿನ ಸರ್ಕಾರದ ಮಾನದಂಡವನ್ನೇ ಅಳವಡಿಸುತ್ತಿದ್ದೇವೆ.ಇದರಲ್ಲಿ ಯಡಿಯೂರಪ್ಪ ಸರ್ಕಾರದಿಂದ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.
ಇದೇ ವೇಳೆ ಸಚಿವರು,ಆಲೂಗಡ್ಡೆ ಬೀಜ ಭೂಮಿಯಲ್ಲೇ ಕೊಳೆಯುತ್ತಿದೆ.ಈಗಾಗಲೇ ಆಲೂಗಡ್ಡೆ ಬೆಳೆ ನಾಶವಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ.ಎಷ್ಟು ಪ್ರದೇಶದಲ್ಲಿ ಹಾನಿಯಾಗಿದೆ ಎಂದು ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ಅಲ್ಲದೆ, ಈ ಬಗ್ಗೆ ಸಿಎಂ ಜೊತೆ ಆಲೂಗಡ್ಡೆ ಬೆಳೆಗಾರರಿಗೆ ಪರಿಹಾರದ ಬಗ್ಗೆ ಚರ್ಚಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.