ಕಿಚ್ಚ ಸುದೀಪ್ ಕನ್ನಡದ ಸಾಹಸ ಸಿಂಹ

ಕಿಚ್ಚ ಸುದೀಪ್ ಕನ್ನಡದ ಸಾಹಸ ಸಿಂಹ
ಕಿಚ್ಚ ಕನ್ನಡದ ಸಾಹಸ ಸಿಂಹ
ಕಿಚ್ಚ ಸುದೀಪ್ ಕನ್ನಡದ ಸಾಹಸ ಸಿಂಹ

ಬೆಂಗಳೂರು: ಕನ್ನಡ ಚಿತ್ರರಂಗ ಇರುವವರೆಗೂ ಸಾಹಸ ಸಿಂಹ ವಿಷ್ಣುವರ್ಧನ್ ಅವರು ಜೀವಂತವಾಗಿ ಇರುತ್ತಾರೆ ಎಂದು ಕಿಚ್ಚ ಸುದೀಪ್  ಟ್ವೀಟ್ ಮಾಡಿದ್ದಾರೆ.
ಕಿಚ್ಚ ಸದಾ ಟ್ವಿಟ್ಟರ್‌ನಲ್ಲಿ ಸಕ್ರಿಯವಾಗಿ ಇರುತ್ತಾರೆ. ಅಭಿಮಾನಿಗಳ ಜೊತೆ ಚಾಟ್ ಮಾಡುತ್ತಾರೆ.ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಿರುತ್ತಾರೆ. ಈಗ ಕಳೆದ ಮೇ ೨೩ಕ್ಕೆ ಡಾ. ವಿಷ್ಣುವರ್ಧನ್ ಅವರು ಬಣ್ಣ ಹಚ್ಚಿ ೪೮ ವರ್ಷಗಳು ಕಳೆದಿವೆ. 
ಈ ವಿಚಾರವಾಗಿಯೂ ಕೂಡ ಕಿಚ್ಚ ಟ್ವೀಟ್ ಮಾಡಿದ್ದಾರೆ.ಈ ಸುಂದರವಾದ ಕ್ಷಣಗಳನ್ನು ಸೆರೆಹಿಡಿಯಲು ಆ ಕ್ಯಾಮೆರಗಳು ಅದೃಷ್ಟ ಮಾಡಿದ್ದವು. ಅವುಗಳಿಗೆ ಅಂದು ಗೊತ್ತಿರಲಿಲ್ಲ ಇಂದು ನಾವು ಸೆರೆಹಿಡಿಯುತ್ತಿರುವ ವ್ಯಕ್ತಿ ಮುಂದೇ ಒಂದು ದಿನ ಲೆಜೆಂಡ್ ಆಗಿ ಬೆಳೆಯುತ್ತಾರೆ. ನಾಗರಹಾವು ಸಿನಿಮಾ, ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಹಾಗೂ ವಿಷ್ಣು ಸರ್ ಅವರು ಕನ್ನಡ ಚಿತ್ರರಂಗ ಇರುವವರೆಗೂ ಜೀವಂತವಾಗಿ ಇರುತ್ತಾರೆ ಎಂದು ಕಿಚ್ಚ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.                              ಇದಕ್ಕೆ ಸಂತಸ ವ್ಯಕ್ತಪಡಿಸಿರುವ ಕಿಚ್ಚ ಮತ್ತು ವಿಷ್ಣುವರ್ದನ್ ಅಭಿಮಾನಿಗಳು, ನೀವು ಕೂಡ ದಾದನ ಹಾಗೇ ಅಣ್ಣ ಎಂದು ಕಮೆಂಟ್ ಮಾಡಿದ್ದಾರೆ.