ಕಿಚ್ಚನ ಖಡಕ್ ಲುಕ್..ಅಭಿಮಾನಿಗಳು ಫಿದಾ..!

ಕಿಚ್ಚನ ಖಡಕ್ ಲುಕ್..ಅಭಿಮಾನಿಗಳು ಫಿದಾ..!
ಕಿಚ್ಚನ ಖಡಕ್ ಲುಕ್
ಕಿಚ್ಚನ ಖಡಕ್ ಲುಕ್..ಅಭಿಮಾನಿಗಳು ಫಿದಾ..!

ಬೆಂಗಳೂರು: ಚಂದನವನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಖಡಕ್ ಲುಕ್ ಹಾಗೂ ಬೇರ್ ಬಾಡಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ಸುದೀಪ್ ಅವರು ಪೈಲ್ವಾನ್ ಸಿನಿಮಾದ ಸಮಯದಲ್ಲಿ ತಮ್ಮ ದೇಹವನ್ನು ದಂಡಿಸಿ ಖಡಕ್ ಬಾಡಿ ಮಾಡಿದ್ದರು. ಈಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿವೆ.
ಕಿಚ್ಚನ ಖಡಕ್ ಲುಕ್ ಇರುವ ಈ ಫೋಟೋಗಳನ್ನು ಹಂಚಿಕೊAಡಿರುವ ನಿರ್ದೇಶಕ ಪವನ್ ಒಡೆಯರ್, ಬಹಳ ಚೆನ್ನಾಗಿದೆ ಹಾಗೂ ಸ್ಫೂರ್ತಿದಾಯಕವಾಗಿದೆ. ಕಿಚ್ಚ ಸುದೀಪ್ ಸರ್ ನಿಮ್ಮ ಈ ಉತ್ಸಾಹ ನಮಗೆ ಪ್ರೇರಣೆ ಎಂದು ಬರೆದುಕೊಂಡಿದ್ದಾರೆ. 
ಇದಕ್ಕೆ ಕಿಚ್ಚ ಸುದೀಪ್ ಅವರು ಕೂಡ ರೀಪ್ಲೈ ಮಾಡಿದ್ದು, ನಾನು ಇನ್ನೊಬ್ಬರಿಗೆ ಸ್ಫೂರ್ತಿ ಆಗುತ್ತೇನೆ ಎಂದರೆ ನನಗೂ ಖುಷಿಯಾಗುತ್ತದೆ. ಲವ್ ಯೂ ಸ್ನೇಹಿತ ಎಂದು ಬರೆದುಕೊಂಡಿದ್ದಾರೆ.